ಮಾನವ

ಶೂನ್ಯದಲಿ ಸೃಷ್ಟಿಯನು
ಸೃಷ್ಟಿಯಲಿ ಸಮತೆಯನು
ಸಮತೆಯಲಿ ಮಮತೆಯನು
ಕಾಣುವ ಕವಿ ಭಾವಜೀವಿ

ಕತ್ತಲಲಿ ಬೆಳಕನ್ನು
ಬೆಳಕಲ್ಲಿ ದೃಷ್ಟಿಯನು
ದೃಷ್ಟಿಯಿಂದಲೇ ಸತ್ಯ -ಮಿಥ್ಯಗಳನರಿವ
ಪ್ರಮಾಣ ಪಥಿಕನವ ವಿಜ್ಞಾನಿ

ಆದಿಯಲಿ ಅಂತ್ಯವನು
ಅಂತ್ಯದಲಿ ಉಗಮವನು
ಚಕ್ರಗತಿಯಲೆ ಪಯಣಗಳೆಷ್ಟೋ
ಕಳೆದರೂ ಬಿಡದೆ ಹಟದಲಿ
ಪ್ರಾಣದಲೆ ಪ್ರಣವನನು ಅರಿವವ ತತ್ವಜ್ಞಾನಿ

ಎದೆಯಲಿದ್ದರೂ ಗುಡಿಯಲೆಲ್ಲೋ ಹುಡುಕುತ
ಪೂರ್ಣಬ್ರಹ್ಮನನು ಕಂಡು ಕಾಣದೆ
ಕಣದಷ್ಟೆ ಜ್ಞಾನದೆ ಕಾಣದುದ ವರ್ಣಿಸುತ
ತ್ರುಣದಿ ತೃಣವಾಗಿ ಕ್ಷಣದ ಜೀವನದೆ
ಕ್ಶಣಿಸಿ ಕಳೆವ ಕಳೆಯುತಲೆ ಪಡೆವ
ನಾನ್ಯಾರೊ "ಮಾನವ " ?

No comments:

Post a Comment