Showing posts with label ಪಿಸುಮಾತುಗಳು. Show all posts
Showing posts with label ಪಿಸುಮಾತುಗಳು. Show all posts

ಕರಗುವ ಮೇಣದ ಪಿಸುಮಾತುಗಳು

ಬೆಳಕು ನಂದದಿರಲೆಂದು

ಕೈ ಅಡ್ಡ ಹಿಡಿದಾಗ

ಧಗೆಯಲಿ ಬೆಂದ ಮೃದು ಮೇಣ

ಬಿಳಿಯ ಹೊಗೆಯಲಿ

ನಿಟ್ಟುಸಿರಿಟ್ಟಿತು...

~~~

~~~
ಜಗವ ತಿರುಗಿ ಬಳಿದು ಬಂದ ಗಾಳಿಯಲೆಯು
ಬಿಗುವ ಮರೆತು ಮಾತನಾಡೆ
ನಗುತ ಜಗವ ಕಂಡ ಬಗೆಯಲರಳಿ ,
ಹಗಲು ಬರಲು ಮೇಣ ಮೌನದಲ್ಲಿ ಲೀನವಾಯಿತು.